ರಾಯಲ್ ಸೊಸೈಟಿ
ಯುರೋಪಿನ ಅತ್ಯಂತ ಪ್ರಾಚೀನ ಹಾಗೂ ಪ್ರತಿಷ್ಠಿತ ಸಾಂಸ್ಕøತಿಕ ಸಂಸ್ಥೆ. ಇದನ್ನು 1660ರಲ್ಲಿ ಸ್ಥಾಪಿಸಲಾಯಿತು. ಆದರೆ ಅದಕ್ಕೂ ಮುಂಚೆ ಇದು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಲಂಡನ್ನಿನಲ್ಲಿ ವಾರಕ್ಕೊಮ್ಮೆ ಈ ಸಂಸ್ಥೆಯ ಸದಸ್ಯರು ಸಭೆ ಸೇರಿ ತತ್ವಶಾಸ್ತ್ರ, ವಿe್ಞÁನ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಹಾಗೂ ಚರ್ಚೆಗಳನ್ನು ನಡೆಸುತ್ತಿದ್ದರು. ಈ ವಿಷಯಗಳನ್ನು ಇವರು ಹೊಸ ತತ್ತ್ವಶಾಸ್ತ್ರ ಅಥವಾ ಪ್ರಾಯೋಗಿಕ ತತ್ತ್ವಶಾಸ್ತ್ರ ಎಂದು ಕರೆಯುತ್ತಿದ್ದರು.

ರಾಯಲ್ ಸೊಸೈಟಿ ಸ್ಥಾಪನೆಯಾದ ಅನಂತರ, ಇದರ ನಿರಂತರ ನಿಯತ ಕಾರ್ಯಕ್ರಮಗಳ `ಮೆಮೊರಾಂಡಮ್ ಆರಂಭಗೊಂಡಿತು. ಇದರ ಕಾರ್ಯಕ್ರಮಗಳು ವಿಶೇಷವಾಗಿ ಲಂಡನ್ನಿನ ಗ್ರೇಷಂ ಕಾಲೇಜಿನಲ್ಲಿ ನಡೆಯಲು ಆರಂಭಿಸಿದವು. ಪ್ರತಿ ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ಸಭೆ ಸೇರಿದ ಕ್ರಮವನ್ನು ಬೆಳೆಸಿಕೊಂಡು ಬಂದ ಇದರ ಸದಸ್ಯರು ವಿಲ್ಕಿನ್ಸ್ ಎಂಬವನನ್ನು ಅಧ್ಯಕ್ಷನನ್ನಾಗಿ ಆರಿಸಿದರು. ಈತನೇ ಈ ಸಂಸ್ಥೆಯ ಕಾರ್ಯಕ್ರಮಗಳಿಗೆ ತನ್ನ ಒಪ್ಪಿಗೆಯನ್ನು ನೀಡಿದ. ಈ ಸಂಸ್ಥೆಯಲ್ಲಿ 55 ಜನಸದಸ್ಯರು ಮಾತ್ರ ಇರಬೇಕೆಂದು ತೀರ್ಮಾನಿಸಲಾಯಿತು. ಫಿಷಿಯನ್ ಕಾಲೇಜಿನ ಫೆಲೊಗಳು, ವಿಶ್ವವಿದ್ಯಾಲಯಗಳ ಗಣಿತ ವಿe್ಞÁನ ಮತ್ತು ಭೌತ ವಿe್ಞÁನದ ಪ್ರಾಧ್ಯಾಪಕರು ಹಾಗೂ ಪ್ರಾಕೃತಿಕ ತತ್ತ್ವ ಶಾಸ್ತ್ರದ ವಿದ್ವಾಂಸರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಯಿತು. 1661ರಲ್ಲಿ ಸರ್ ರಾಬರ್ಟ್ ಮೊರೆ ಇದರ ಅಧ್ಯಕ್ಷನಾಗಿ ಚುನಾಯಿತನಾದ. ಇದೇ ವರ್ಷದಲ್ಲಿ ಇಂಗ್ಲೆಂಡಿನ ದೊರೆ ವಿದ್ಯುಕ್ತವಾಗಿ ಈ ಸಂಸ್ಥೆಯನ್ನು ಪ್ರವೇಶಿಸಿದ್ದರಿಂದ ಈ ಸಂಸ್ಥೆಗೆ ರಾಯಲ್ ಸೊಸೈಟಿ ಎಂಬ ಹೆಸರು ಬಂತು. ಕಾಲಕ್ರಮದಲ್ಲಿ ಹೊಸ ಹೊಸ ನಿಯಮಗಳನ್ನು ಮಾಡಿಕೊಂಡು 1663ರಲ್ಲಿ ಬೆಲ್ಸಿಯ ಎಂಬಲ್ಲಿ ಸೊಸೈಟಿಗಾಗಿ ಭೂಮಿಯನ್ನು ಪಡೆದುಕೊಳ್ಳಲಾಯಿತು. ಈ ಸಂಸ್ಥೆಯ ಪ್ರತಿಷ್ಠಿತ ನಿಯತಕಾಲಿಕ ಫಿಲಾಸಾಫಿಕಲ್ ಟ್ರಾನ್ಸಾಕ್ಷನ್ಸ್ 1664-65ರಲ್ಲಿ ಪ್ರಕಟಗೊಂಡಿತು. ಹೆನ್ರಿ ಓಲ್ಡನ್ ಬರ್ಗ್ ಎಂಬಾತ ಈ ಸಂಸ್ಥೆಯ ಮೊದಲನೆಯ ಕಾರ್ಯದರ್ಶಿಯಾಗಿ ನೇಮಕಗೊಂಡ. ಈ ಪ್ರಕಟಣೆಯ ಜೊತೆಗೆ ಕೆಲವು ಗ್ರಂಥಗಳನ್ನೂ ಪ್ರಕಟಿಸಲಾಯಿತು. ಇದರಿಂದಾಗಿ ಈ ಸಂಸ್ಥೆಗೆ ಪ್ರತಿಷ್ಠೆ ಹಾಗೂ ಮನ್ನಣೆಗಳು ಪ್ರಾಪ್ತವಾದವು. 1887ರಲ್ಲಿ ಫಿಲಾಸಾಫಿಲ್ ಟ್ರನ್ಸಾಕ್ಷನ್ಸ್ ನಿಯತಕಾಲಿಕೆಯನ್ನು ಎ ಮತ್ತು ಬಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಎ ಬಿಭಾಗದಲ್ಲಿ ಗಣಿತಹಾಗೂ ಭೌತವಿe್ಞÁನದ ಲೇಖನಗಳು ಮತ್ತು ಬಿ ವಿಭಾಗದಲ್ಲಿ ಜೀವವಿe್ಞÁನದ ಲೇಖನಗಳು ಪ್ರಕಟಗೊಳ್ಳಲು ಆರಂಭವಾದವು. ಸ್ವಲ್ಪ ಕಾಲಾನಂತರ ಇದರ ಹೆಸರನ್ನು ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಎಂದು ಬದಲಾಯಿತು. ಇಂದಿಗೂ ಅದೇ ಹೆಸರಿನಲ್ಲಿ ಇದರ ನಿಯತಕಾಲಿಕೆ ಪ್ರಕಟಗೊಳ್ಳುತ್ತಿದೆ.

ಈ ಸಂಸ್ಥೆಯ ಇತರ ಕಾರ್ಯಕ್ರಮಗಳಲ್ಲಿ ಮುಖ್ಯವಾದುದು ವಸ್ತು ಸಂಗ್ರಹಾಲಯ ಸ್ಥಾಪನೆ ಮತ್ತು ವೈe್ಞÁನಿಕ ಪ್ರಯೋಗ. ಇದರ ವಸ್ತು ಸಂಗ್ರಹಾಲಯ ಲಂಡನ್ನಿನಲ್ಲೇ ಅತ್ಯಂತ ಖ್ಯಾತವಾಗಿತ್ತು. ಇದನ್ನು ಕಾರಣಾಂತರದಿಂದ ಬ್ರಿಟಿಷ್ ಮ್ಯೂಸಿಯಂಗೆ ದಾನ ಕೊಡಲಾಯಿತು. ಕೆಲವು ವಸ್ತುಗಳು ಮಾತ್ರ ಬರ್ಲಿಂಗ್‍ಟನ್ ಭವನದಲ್ಲಿವೆ; ಕೆಲವನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂಗೆ ಕೊಡಲಾಯಿತು.

ಲಂಡನ್ನಿನಲ್ಲಿ ಅನೇಕ ಕಟ್ಟಡಗಳು ಬೆಂಕಿಯಲ್ಲಿ ನಾಶವಾದಾಗ, ರಾಯಲ್ ಸೊಸೈಟಿಯು ಅರುಂಡೆಲ್ ಭವನದಲ್ಲಿ ಕಾರ್ಯನಿರ್ವಹಿಸಲಾರಂಭಿಸಿತು. ಅರುಂಡೇಲ್ ವಂಶದವರಿಂದ ದಾನವಾಗಿ ದೊರೆತ ಪುಸ್ತಕಗಳನ್ನು ಒಳಗೊಂಡಂತೆ ಗ್ರಂಥಾಲಯವನ್ನು ಸ್ಥಾಪಿಸಲಾಯಿತು. ಇದರಲ್ಲಿದ್ದ ಅಮೂಲ್ಯ ಹಸ್ತಪ್ರತಿಗಳನ್ನು ಬ್ರಿಟಿಷ್ ಮ್ಯೂಸಿಯಂಗೆ ಮಾರಿ ಬಂದ ಹಣದಿಂದ ವಿe್ಞÁನಕ್ಕೆ ಸಂಬಂಧಿಸಿದ ಸಾವಿರಾರು ಪುಸ್ತಕಗಳನ್ನು ಗ್ರಂಥಾಲಯಕ್ಕೆ ಸೇರಿಸಲಾಯಿತು 1671-72ರಲ್ಲಿ ವಿe್ಞÁನಿ ನ್ಯೂಟನ್‍ನನ್ನು ಈ ಸಂಸ್ಥೆಯ ಫೆಲೊ ಆಗಿ ಆರಿಸಲಾಯಿತು. 1673ರಲ್ಲಿ ನ್ಯೂಟನ್ ಇದರ ಅಧ್ಯಕ್ಷನಾದ. ಆತ ನಿಧನನಾಗುವವರೆಗೆ (1727) ಆ ಪದವಿಯನ್ನು ಅಲಂಕರಿಸಿದ. ಆ ಸಮಯದಲ್ಲಿ ಸಂಸ್ಥೆ ಕ್ರೇನ್ ಕೋರ್ಟ್ ಎಂಬ ಭವನಕ್ಕೆ ವರ್ಗಾವಣೆಗೊಂಡಿತು. ಅನಂತರ ಇದು ಸಾಮರ್‍ಸೆಟ್ ಭವನಕ್ಕೆ ವರ್ಗಾಯಿಸಲ್ಪಟ್ಟು 1857ರಲ್ಲಿ ಬರ್ಲಿಂಗ್‍ಟನ್ ಭವನಕ್ಕೆ ಹೋಯಿತು.

ರಾಯಲ್ ಸೊಸೈಟಿ ಆರಂಭವಾದಂದಿನಿಂದಲೂ ಇಂಗ್ಲೆಂಡಿನ ಸರ್ಕಾರ ಅನೇಕ ಬೌದ್ಧಿಕ ಶಿಸ್ತಿನ ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಈ ಸಂಸ್ಥೆಯಿಂದ ಪಡೆಯುತ್ತ ಬಂದಿದೆ. ಇದು ಈ ಸಂಸ್ಥೆಯ ಹೆಗ್ಗಳಿಕೆ. ಈ ಸಂಸ್ಥೆ ಸ್ವತಃ ಅನೇಕ ಅನ್ವೇಷಣಾ ಕಾರ್ಯಗಳನ್ನು ಕೈಗೊಂಡು ವೈe್ಞÁನಿಕ ವಿಷಯಗಳಲ್ಲಿ ಸಹಾಯ ಮಾಡಿದೆ. 1913-17ರಲ್ಲಿ ಬ್ರಿಟಿಷ್ ದ್ವೀಪಗಳ ಮ್ಯಾಗ್ನೆಟಿಕ ಸರ್ವೆ, 1926ರಲ್ಲಿ ಐನ್‍ಸ್ಟೀನ್‍ನ ಸಿದ್ಧಾಂತದ ಅಧ್ಯಯನ, ಸೂರ್ಯಗ್ರಹಣದ ಅಧ್ಯಯನ, ಮಲ್ಭೆರಿಯ ಹಾಗೂ ಮೆಡಿಟರೇನಿಯನ್ ಜ್ವರ ಮುಂತಾದವುಗಳನ್ನು ಇಲ್ಲಿ ಉಲ್ಲೇಖಿಸಬಹುದು. ಸರ್ಕಾರದ ಪರವಾಗಿ ಅರವತ್ತು ಸಾವಿರ ಪೌಂಡ್ ಮೌಲ್ಯದ ಅನುದಾನವನ್ನು ಪಡೆದು, ವೈe್ಞÁನಿಕ ವಿಷಯಗಳ ಅಧ್ಯಯನ ಮತ್ತು ಸಂಶೋಧನೆಯ ಕಾರ್ಯವನ್ನು ಮಾಡುತ್ತಿದೆ. ಇದೇ ರೀತಿಯಲ್ಲಿ ನಫೀಲ್ಡ್ ಅನುದಾನವನ್ನು ನಿರ್ವಹಿಸುತ್ತಿದೆ. ವೈe್ಞÁನಿಕ ಹಾಗೂ ತತ್ತ್ವಶಾಸ್ತ್ರ ವಿಷಯಗಳಲ್ಲಿ ಉತ್ತಮ ಲೇಖಕ ಸಂಶೋಧಕರನ್ನು ಗುರುತಿಸುವ ಸಲುವಾಗಿ ರಾಯಲ್ ಸೊಸೈಟಿ ಅನೇಕ ಪದಕ ಮತ್ತು ಪಾರಿತೋಷಕಗಳನ್ನು ಪ್ರತಿಷ್ಠಿತ ವ್ಯಕ್ತಿಗಳ ಹೆಸರಿನಲ್ಲಿ ಮಾಡುತ್ತದೆ. ಡಾರ್ಮಿನ್ ಮೆಡಲ್, ಕೋಪ್ಲೆ ಮೆಡಲ್, ಡೇವಿ ಮೆಡಲ್, ಹ್ಯೂಗ್ಸ್ ಮೆಡಲ್ - ಇಂಥ ಕೆಲವು ಪದಕಗಳು. ಹೀಗೆಯೇ ಪ್ರತಿಷ್ಠಿತ ವ್ಯಕ್ತಿಗಳ ಹೆಸರಿನಲ್ಲಿ ಉಪನ್ಯಾಸಗಳನ್ನೂ ಈ ಸಂಸ್ಥೆ ಏರ್ಪಡಿಸುತ್ತದೆ. ಇಲ್ಲಿ ಮಂಡಿಸಲಾಗುವ ಸಂಬಂಧಗಳನ್ನು ಆಯಾ ವಿಷಯದ ತಜ್ಞರ ಪರಾಮರ್ಶೆಯ ಅನಂತರ ಪ್ರಕಟಿಸಲಾಗುತ್ತದೆ.
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ